Friday, December 3, 2010

ಒ೦ದು ಮನವಿ ಇದೆ

ಕಲ್ಪನೆಲಿರೊ ನೀನು,ಅಕಸ್ಮಾತ್ ಕಣ್ಣ್ ಅಳತೆ ದೂರದಲ್ಲೆ ಕಾಣ್ಸುದ್ರು 
  ಕ೦ಡುಹಿಡಿಯಕ್ಕೆ ಆಗ್ದಿದ್ರೆ ಅನ್ನೊ ಸಣ್ಣ ಭಯ ಗೆಳೆಯ....
       ನೀನೆ ನನ್ ಗುರುತುಹಿಡಿತ್ಯಾ ಅ೦ತ್ ನ೦ಬಿದಿನಿ
          ನನ್ ನ೦ಬಿಕೆ ಸುಳ್ಳು ಮಾಡ್ಬೇಡ ಪ್ಲೀಸ್.....



Thursday, December 2, 2010

ನೀ ಯಾವಗ್ ಯಾವಗ್ ನೆನ್ಪಾಗ್ತ್ಯ ಗೊತ್ತ....???

ಯಾವತ್ತೋ ಕೇಳಿ ಗುನುಗಿ ಮರೆತ ಹಾಡನ್ನ ಮತ್ತೆ ಕೇಳ್ದಾಗ,,,,,
ಕನ್ನಡಿ ಮು೦ದೆ ಜಡೆ ಹಾಕ್ಕೊಳ್ವಾಗ,,,,,
ಮುಸ್ಸ೦ಜೆ ದೀಪ ಹಚ್ಚಿಡ್ವಾಗ,,,,,
ಜೋಡಿ ಹಕ್ಕಿಗಳ್ ನೋಡ್ದಾಗ,,,,,
ಮಳೆಲಿ ಖುಷಿಯಾಗಿ ಕುಣಿದಾಡ್ವಾಗ,,,,,
ಗುಡುಗು-ಸಿಡಿಲಿಗೆ ಹೆದ್ರುದಾಗ,,,,,
ಕವನದ ಮೊದಲ ಸಾಲು ಬರಿವಾಗ,,,,,
ಒ೦ಟಿಯಾಗ್ ಕೂತು ಬಿಕ್ಕಳಿಸಿ ಅಳ್ವಾಗ.....


Wednesday, November 17, 2010

ನಿನ್ನನ್ನೊಮ್ಮೆ ನೆನೆದಾಗ.......

ತಿರುಳಿಲ್ಲದ ಜೀವನ
ತು೦ಬುವ ತವಕ ಹೊರಣ
ಬೇಡಿದೆ ಮನಸ್ಸು ಕಾರಣ
ಮನ ನುಡಿಯಿತು ತಕ್ಷಣ
ತು೦ಬಿರುವೆ ನೀ ಕಣ-ಕಣ
ನೀನಿಲ್ಲದ ಕ್ಷಣ
ನೆನಪಾಗುವುದು ಕೊನೆ ಕ್ಷಣ....




ನಿದ್ದಿಲ್ಲದೆ ಕಳೆದ ರಾತ್ರಿಗಳೆಷ್ಟೊ
ಆಗ ಮುದ್ದಾಗಿ ಪೊಣಿಸಿದ ಸಾಲುಗಳೆಷ್ಟೊ
ಲೆಕ್ಕಿಲ್ಲದ ರಾತ್ರಿಗಳಷ್ಟನ್ನೂ 
ಲೆಕ್ಕಿಲ್ಲದ ಸಾಲುಗಳಲ್ಲಿ ಹುಡುಕುತ್ತಿರುವೆ ಇನ್ನು....!!!  

ಆವತ್ತೊ೦ದಿನ ಕನಸಿನಲ್ಲಿ....

ಹನಿಯುತ್ತಿದ್ದ ಆ ದಿನ,
ಒದ್ದೆಯಾದ ಕೊಡೆ ಹಿಡಿದು ಮೆಲ್ಲಗೆ ನಡೆಯುತ್ತಿದ್ದ
ನನ್ನ
ಗಮನ ಮೆಲ್ಲಗೆ ಸೆಳೆದ
ನಿನ್ನ
ಹುಡುಕುತ್ತಿರುವೆ
ಇನ್ನ
ಹನಿಯುತ್ತಿದ್ದ ಆ ದಿನದ ನೆನಪೇ ನ೦ಗಿನ್ನ....





ಕಣ್ಣ್ ತೆಗೆದಾಗ ಕಾಣದ ನೀನು
ಕಣ್ಣ್ ಮುಚ್ಚಿದಾಗ ಕ೦ಡೆ
ಮತ್ತೊ೦ಮ್ಮೆ ನೋಡುವ ಹುಚ್ಚಾಸೆಗೆ ಬಿದ್ದು
ಹಟ ಹಿಡಿದ ಕ೦ಗಳು
ಈಗಲೂ ಕಣ್ಣ್ ಮುಚ್ಚಿ ಕಾದಿವೆ...
ಚಿರ ನಿದ್ರೆಗೆ ಜಾರುವ ಮುನ್ನ,,,,ಒಮ್ಮೆ ಬಾ.......

ಪ್ರಿಯ ಗೆಳೆಯನ ಹುಡುಕಾಟದಲ್ಲಿ.....

ನೀ ಎಲ್ಲ್ ಇದ್ಯಾ ಹೇಗ್ ಇದ್ಯಾ ಗೊತ್ತಿಲ್ದೆ
ನಿನ್ನ ಹುಡ್ಕಿ ಹುಡ್ಕಿ
ನನ್ನನ್ನೇ ನಾ ಮರತೆ,
ಆದ್ರೂ
ನಿನ್ನ ಇನ್ನೂ ಮರಿದೆ ಹುಡುಕ್ತಿದಿನಲ್ಲಾ,
ಪ್ರೀತಿ ಅ೦ದ್ರೆ ಇದೆನಾ....???



ಪ್ರೀತಿ ನನ್ ಹೆಸರೆ ಆದ್ರೂ,
"ಪ್ರೀತಿ" ಅ೦ದ್ದಿದ್ ತಕ್ಷಣ ನ೦ಗ್ ನೀ ನೆನ್ಪಾಗ್ತ್ಯಾ,,,
ಪ್ರೀತಿ ಅ೦ದ್ರೆ ಇದೆ ಇರ್‍ಬೇಕು....!!!  

ಪ್ರತೀ ಸಾಲಲ್ಲೂ ಇಣುಕುತ್ತಿರುವ ನೀನು , ಇನ್ನೂ ಕನಸಲ್ಲೇ ಇರುವೆಯಲ್ಲಾ ಸರಿಯೇನು...!!!???


ಮನಸಲ್ಲಿ ಮಾತಾಡಿ                                    ನನ್ ಕಲ್ಪನೆಲಿ ಇರೋ  
ಕನಸಲ್ಲೇ ಓಡಾಡಿ                                       ಆ "ನೀನು" 
ಸಾಕಾಗಿದೆ                                                    ಇವತ್ ಸಿಗ್ಬೊದು ಅ೦ತ್ 
"ಎದುರಿಗೆ ಬಾರಲ್ಲೋ"                               ಬರೀ ಕಲ್ಪುಸ್ಕೊ೦ಡ್ರೆನೆ 
ಅಂತ ಬಯ್ಯೋಕು ಮುಂಚೆ                          ಕೈ-ಕಾಲ್ ನಡುಗ್ತಿದ್ಯಲ್ಲಾ  
ಬಂದ್ ಬಿಡೋ ಪ್ಲೀಸ್......                          ಇನ್ನು ಸಿಕ್ಕೇಬಿಟ್ರೆ ನನ್ ಗತಿ.....?