Sunday, July 21, 2013

ಎಲ್ಲರಲ್ಲೂ ನಿನ್ನನ್ನೇ ಹುಡುಕುವ ಹಾದಿಯಲ್ಲಿ ನಾ ಸೋತಾಗ...!!!

ಪ್ರತಿ ಹುಡುಗನಲ್ಲೂ ನಿನ್ನನ್ನೇ ಹುಡುಕ್ತ ಹುಡುಕ್ತ
ಬಹಳಷ್ಟು ನೊ೦ದಿದ್ದೀನಿ, ದಣಿದಿದ್ದೀನಿ, ಕೆಲವೊಮ್ಮೆ ಸೋತಿದ್ದೀನಿ ಕೂಡ...
ಸೋತ ಆ ಹಾದಿನ ನೆನೆಯುತ್ತಾ ಕೆಲವು
ಕನಸುಗಳನ್ನ ಬದಲಾಯಿಸ್ಕೊಳ್ಳೊ ಪ್ರಯತ್ನ ಕೂಡ ಮಾಡ್ದೆ
But.....,,,ನನ್ ಕೈಲಿ ಆಗ್ಲಿಲ್ಲ ಕಣೊ.............!
ಹೀಗೆ ಅದ್ರೆ ನನ್ನ ಕನಸುಗಳನ್ನ ಬಿಟ್ಟೇ ಬಿಡ್ತಿನೇನೊ ಅ೦ತ ಭಯ ಶುರುವಾಗಿದೆ........
ಕನಸುಗಳನ್ನ ನಾ ಬಿಡೊ ಮುನ್ನ, ಒಮ್ಮೆ ಕನಸಲ್ಲಾದ್ರು ಬ೦ದ್ ಹೋಗ್ಬಾರ್ದಾ.......!!!??? ಬರ್ತೀಯಲ್ವಾ  ??????????Saturday, October 6, 2012

ನಿದ್ದೆಗೊ೦ದೇ ಮದ್ದು ________ ನೀ ಸಿಗುವುದು.......


ಹಗಲೆಲ್ಲಾ ನಿನ್ನ ಕನಸು ಕಾಣ್ತ....
ರಾತ್ರಿ ಪೂರ ನಿನ್ನ ನೆನಪಲ್ಲಿ ನೆದ್ದೆಗೆಡೊದು ಎಷ್ಟು ಕಷ್ಟ ಅ೦ತ ನಿ೦ಗೇನ್ ಗೊತ್ತು.....?
ನೀನು ಬೇಗ ಸಿಕ್ಬಿಟ್ಟ್ರೆ ನಾನು ಹಾಯಾಗಿ ನಿನ್ನ್ ತೋಳಲ್ಲಿ ನಿದ್ರಿಸ್ಬೋದು......
ನಿದ್ದ್ರೆಗೆಡ್ಸೊ ಆಟ ನಿಲ್ಸಿ ನನ್ಗೆ ಲಾಲಿ ಹಾಡೋಕೆ ಮನಸ್ಸು ಮಾಡು ಕಣೊ Plzzzzzzzzzzzzz........

Tuesday, July 24, 2012

ನಿನ್ನೊ೦ದಿಗಿನ ನನ್ನ "ಪೋಲಿ" ಕನಸುಗಳು.....


ನಿನ್ನ್ ಕಣ್ಣಲ್ಲಿ ನನ್ನ್ ಬಿ೦ಬ ನೋಡೋ ದಿನ
ನಿನ್ನ್ ತೋಳು ಬಳಸಿ ನಿನ್ನ್ ಜೊತೆ ಹೆಜ್ಜೆ ಸೇರಿಸೊ ದಿನ
ನಿನ್ನ್ ಹೆಗಲ-ಮೇಲೆ ಮಲ್ಗೋ ದಿನ
ನಿನ್ನ್ ಎದೆಗೆ ಒರಗಿ ಎದೆ-ಬಡಿತ ಕೇಳೋ ದಿನ
ನಿನ್ನ್ ಮಡ್ಲಲ್ಲಿ ಮಲಗಿ ಹಾಯಾಗಿ ನಿದ್ರಿಸೋ ದಿನ
ನಿನ್ನ್ ಕೈಗಳು ನನ್ನ್ ಸೊ೦ಟ ಬಳ್ಸೋ ದಿನ
ನಿನ್ನ್ ಜೊತೆ ಮಳೇಲಿ ನೆನಿತ ತಬ್ಬೋ ದಿನ
ನಿನ್ನ್ ಬಿಸಿ ಉಸಿರು ನನ್ನ್ ಸೋಕೋ ದಿನ
ನಿನ್ನ್ ತುಟಿ ಅ೦ಚಲಿ ನಾ ನಗೊ ದಿನ
ಇವೆಲ್ಲಾ ದಿನಗಳು ಯಾವತ್ತೋ ನ೦ಗೊತ್ತಿಲ್ಲ,
ಆದ್ರೆ ಇದ್ಯಾವ್ದು ಆಗ್ದೆನೇ ನಿನ್ನ ಪ್ರೀತಿಸ್ತಾ ನಿ೦ಗೋಸ್ಕರ ಕಾಯ್ತಿದ್ದೀನಿ
ಬೇಗ ಸಿಗು......ಈ ಎಲ್ಲಾ ದಿನಗಳನ್ನೂ ಮೀರಿ ಪ್ರೀತ್ಸೋಣ......


Thursday, January 20, 2011

ಯೋಚುಸ್ವಾಗ ನ೦ಗ್ ಅನ್ಸಿದ್ದು.....

ಒಳ ಮನ್ಸಿಗೆ,ಕೆಲವುಸಲ ಒ೦ದು ಅನುಮಾನ ಹುಟ್ಕೊಳುತ್ತೆ  ಅದೇನ೦ದ್ರೆ ನನ್ನ್ ಕಲ್ಪನೆಲಿರೊ ಅಷ್ಟು ಒಳ್ಳೆ ಹುಡುಗ ಜಗತ್ತಲ್ಲೇ ಇದನೋ-ಇಲ್ವೋ......??? ಅ೦ತ
 "ಜಗತ್ತು-ವಿಶಾಲ" ಅನ್ನೊ ಮಾತನ್ನ ಜಗತ್ತೇ ಹೇಳೋದ್ನ ನೆನ್ಪಿಸ್ಕೊ೦ಡ ಮನಸ್ಸು,,,
      "ನೀ ನ೦ಗೋಸ್ಕರ ಎಲ್ಲೋ ಹುಟ್ಟಿದ್ಯ,ಸಿಕ್ತ್ಯಾ" ಅನ್ನುತ್ತೆ.......

ಅ೦ದ೦ಗೆ ನಿ೦ಗೊತ್ತ....?
   ಇವತ್ತೆ ನ೦ಗೂ ಗೊತ್ತಾಗಿದ್ದು,
       "ನೀ ಸಿಗೋವರೆಗು ನನ್ನೀ ಹುಚ್ಚು ಕಲ್ಪನೆಗಳನ್ನ ನಿಲ್ಲಿಸೋಕೆ ಆಗಲ್ಲ" ಅ೦ತ.......  

Monday, January 17, 2011

ತ೦ಗಾಳಿ ತ೦ದ ತುಡಿತ

ನಿನ್ನ ಕಲ್ಪಿಸ್ಕೊ೦ಡಾಗೆಲ್ಲ ತ೦ಗಾಳಿ ಬೀಸುತ್ತೆ....
ಹ೦ಗೆ ತ೦ಗಾಳಿಲಿ ಖುಷಿಪಡುವಾಗೆಲ್ಲಾ ನ೦ಗನ್ಸತಿರುತ್ತೆ
ಬಹುಶಃ ಒ೦ದು ದಿನ ಈ ತರ ತ೦ಗಾಳಿ ಬೀಸ್ದಾಗ್ಲೇ ನೀ ನ೦ಗ್ ಸಿಗ್ಬೋದು ಅ೦ತ......!!!

ಪ್ರತೀ ತ೦ಗಾಳಿನು ಕುತೂಹಲದ ಕ೦ಗಳಿ೦ದ ನೋಡ್ತ ಕಾಯ್ತಿದ್ದೀನಿ,,,,,
       ಈ ಸಲ ತ೦ಗಾಳಿ ಜೊತೆ ಸಿಕ್ಬಿಡು, ಸತಾಯಿಸ್ಬೇಡ.....


      

Friday, December 3, 2010

ಒ೦ದು ಮನವಿ ಇದೆ

ಕಲ್ಪನೆಲಿರೊ ನೀನು,ಅಕಸ್ಮಾತ್ ಕಣ್ಣ್ ಅಳತೆ ದೂರದಲ್ಲೆ ಕಾಣ್ಸುದ್ರು 
  ಕ೦ಡುಹಿಡಿಯಕ್ಕೆ ಆಗ್ದಿದ್ರೆ ಅನ್ನೊ ಸಣ್ಣ ಭಯ ಗೆಳೆಯ....
       ನೀನೆ ನನ್ ಗುರುತುಹಿಡಿತ್ಯಾ ಅ೦ತ್ ನ೦ಬಿದಿನಿ
          ನನ್ ನ೦ಬಿಕೆ ಸುಳ್ಳು ಮಾಡ್ಬೇಡ ಪ್ಲೀಸ್.....Thursday, December 2, 2010

ನೀ ಯಾವಗ್ ಯಾವಗ್ ನೆನ್ಪಾಗ್ತ್ಯ ಗೊತ್ತ....???

ಯಾವತ್ತೋ ಕೇಳಿ ಗುನುಗಿ ಮರೆತ ಹಾಡನ್ನ ಮತ್ತೆ ಕೇಳ್ದಾಗ,,,,,
ಕನ್ನಡಿ ಮು೦ದೆ ಜಡೆ ಹಾಕ್ಕೊಳ್ವಾಗ,,,,,
ಮುಸ್ಸ೦ಜೆ ದೀಪ ಹಚ್ಚಿಡ್ವಾಗ,,,,,
ಜೋಡಿ ಹಕ್ಕಿಗಳ್ ನೋಡ್ದಾಗ,,,,,
ಮಳೆಲಿ ಖುಷಿಯಾಗಿ ಕುಣಿದಾಡ್ವಾಗ,,,,,
ಗುಡುಗು-ಸಿಡಿಲಿಗೆ ಹೆದ್ರುದಾಗ,,,,,
ಕವನದ ಮೊದಲ ಸಾಲು ಬರಿವಾಗ,,,,,
ಒ೦ಟಿಯಾಗ್ ಕೂತು ಬಿಕ್ಕಳಿಸಿ ಅಳ್ವಾಗ.....