Tuesday, July 24, 2012

ನಿನ್ನೊ೦ದಿಗಿನ ನನ್ನ "ಪೋಲಿ" ಕನಸುಗಳು.....


























ನಿನ್ನ್ ಕಣ್ಣಲ್ಲಿ ನನ್ನ್ ಬಿ೦ಬ ನೋಡೋ ದಿನ
ನಿನ್ನ್ ತೋಳು ಬಳಸಿ ನಿನ್ನ್ ಜೊತೆ ಹೆಜ್ಜೆ ಸೇರಿಸೊ ದಿನ
ನಿನ್ನ್ ಹೆಗಲ-ಮೇಲೆ ಮಲ್ಗೋ ದಿನ
ನಿನ್ನ್ ಎದೆಗೆ ಒರಗಿ ಎದೆ-ಬಡಿತ ಕೇಳೋ ದಿನ
ನಿನ್ನ್ ಮಡ್ಲಲ್ಲಿ ಮಲಗಿ ಹಾಯಾಗಿ ನಿದ್ರಿಸೋ ದಿನ
ನಿನ್ನ್ ಕೈಗಳು ನನ್ನ್ ಸೊ೦ಟ ಬಳ್ಸೋ ದಿನ
ನಿನ್ನ್ ಜೊತೆ ಮಳೇಲಿ ನೆನಿತ ತಬ್ಬೋ ದಿನ
ನಿನ್ನ್ ಬಿಸಿ ಉಸಿರು ನನ್ನ್ ಸೋಕೋ ದಿನ
ನಿನ್ನ್ ತುಟಿ ಅ೦ಚಲಿ ನಾ ನಗೊ ದಿನ
ಇವೆಲ್ಲಾ ದಿನಗಳು ಯಾವತ್ತೋ ನ೦ಗೊತ್ತಿಲ್ಲ,
ಆದ್ರೆ ಇದ್ಯಾವ್ದು ಆಗ್ದೆನೇ ನಿನ್ನ ಪ್ರೀತಿಸ್ತಾ ನಿ೦ಗೋಸ್ಕರ ಕಾಯ್ತಿದ್ದೀನಿ
ಬೇಗ ಸಿಗು......ಈ ಎಲ್ಲಾ ದಿನಗಳನ್ನೂ ಮೀರಿ ಪ್ರೀತ್ಸೋಣ......






Thursday, January 20, 2011

ಯೋಚುಸ್ವಾಗ ನ೦ಗ್ ಅನ್ಸಿದ್ದು.....

ಒಳ ಮನ್ಸಿಗೆ,ಕೆಲವುಸಲ ಒ೦ದು ಅನುಮಾನ ಹುಟ್ಕೊಳುತ್ತೆ  ಅದೇನ೦ದ್ರೆ ನನ್ನ್ ಕಲ್ಪನೆಲಿರೊ ಅಷ್ಟು ಒಳ್ಳೆ ಹುಡುಗ ಜಗತ್ತಲ್ಲೇ ಇದನೋ-ಇಲ್ವೋ......??? ಅ೦ತ
 "ಜಗತ್ತು-ವಿಶಾಲ" ಅನ್ನೊ ಮಾತನ್ನ ಜಗತ್ತೇ ಹೇಳೋದ್ನ ನೆನ್ಪಿಸ್ಕೊ೦ಡ ಮನಸ್ಸು,,,
      "ನೀ ನ೦ಗೋಸ್ಕರ ಎಲ್ಲೋ ಹುಟ್ಟಿದ್ಯ,ಸಿಕ್ತ್ಯಾ" ಅನ್ನುತ್ತೆ.......

ಅ೦ದ೦ಗೆ ನಿ೦ಗೊತ್ತ....?
   ಇವತ್ತೆ ನ೦ಗೂ ಗೊತ್ತಾಗಿದ್ದು,
       "ನೀ ಸಿಗೋವರೆಗು ನನ್ನೀ ಹುಚ್ಚು ಕಲ್ಪನೆಗಳನ್ನ ನಿಲ್ಲಿಸೋಕೆ ಆಗಲ್ಲ" ಅ೦ತ.......  

Monday, January 17, 2011

ತ೦ಗಾಳಿ ತ೦ದ ತುಡಿತ

ನಿನ್ನ ಕಲ್ಪಿಸ್ಕೊ೦ಡಾಗೆಲ್ಲ ತ೦ಗಾಳಿ ಬೀಸುತ್ತೆ....
ಹ೦ಗೆ ತ೦ಗಾಳಿಲಿ ಖುಷಿಪಡುವಾಗೆಲ್ಲಾ ನ೦ಗನ್ಸತಿರುತ್ತೆ
ಬಹುಶಃ ಒ೦ದು ದಿನ ಈ ತರ ತ೦ಗಾಳಿ ಬೀಸ್ದಾಗ್ಲೇ ನೀ ನ೦ಗ್ ಸಿಗ್ಬೋದು ಅ೦ತ......!!!

ಪ್ರತೀ ತ೦ಗಾಳಿನು ಕುತೂಹಲದ ಕ೦ಗಳಿ೦ದ ನೋಡ್ತ ಕಾಯ್ತಿದ್ದೀನಿ,,,,,
       ಈ ಸಲ ತ೦ಗಾಳಿ ಜೊತೆ ಸಿಕ್ಬಿಡು, ಸತಾಯಿಸ್ಬೇಡ.....


      

Friday, December 3, 2010

ಒ೦ದು ಮನವಿ ಇದೆ

ಕಲ್ಪನೆಲಿರೊ ನೀನು,ಅಕಸ್ಮಾತ್ ಕಣ್ಣ್ ಅಳತೆ ದೂರದಲ್ಲೆ ಕಾಣ್ಸುದ್ರು 
  ಕ೦ಡುಹಿಡಿಯಕ್ಕೆ ಆಗ್ದಿದ್ರೆ ಅನ್ನೊ ಸಣ್ಣ ಭಯ ಗೆಳೆಯ....
       ನೀನೆ ನನ್ ಗುರುತುಹಿಡಿತ್ಯಾ ಅ೦ತ್ ನ೦ಬಿದಿನಿ
          ನನ್ ನ೦ಬಿಕೆ ಸುಳ್ಳು ಮಾಡ್ಬೇಡ ಪ್ಲೀಸ್.....



Thursday, December 2, 2010

ನೀ ಯಾವಗ್ ಯಾವಗ್ ನೆನ್ಪಾಗ್ತ್ಯ ಗೊತ್ತ....???

ಯಾವತ್ತೋ ಕೇಳಿ ಗುನುಗಿ ಮರೆತ ಹಾಡನ್ನ ಮತ್ತೆ ಕೇಳ್ದಾಗ,,,,,
ಕನ್ನಡಿ ಮು೦ದೆ ಜಡೆ ಹಾಕ್ಕೊಳ್ವಾಗ,,,,,
ಮುಸ್ಸ೦ಜೆ ದೀಪ ಹಚ್ಚಿಡ್ವಾಗ,,,,,
ಜೋಡಿ ಹಕ್ಕಿಗಳ್ ನೋಡ್ದಾಗ,,,,,
ಮಳೆಲಿ ಖುಷಿಯಾಗಿ ಕುಣಿದಾಡ್ವಾಗ,,,,,
ಗುಡುಗು-ಸಿಡಿಲಿಗೆ ಹೆದ್ರುದಾಗ,,,,,
ಕವನದ ಮೊದಲ ಸಾಲು ಬರಿವಾಗ,,,,,
ಒ೦ಟಿಯಾಗ್ ಕೂತು ಬಿಕ್ಕಳಿಸಿ ಅಳ್ವಾಗ.....


Wednesday, November 17, 2010

ನಿನ್ನನ್ನೊಮ್ಮೆ ನೆನೆದಾಗ.......

ತಿರುಳಿಲ್ಲದ ಜೀವನ
ತು೦ಬುವ ತವಕ ಹೊರಣ
ಬೇಡಿದೆ ಮನಸ್ಸು ಕಾರಣ
ಮನ ನುಡಿಯಿತು ತಕ್ಷಣ
ತು೦ಬಿರುವೆ ನೀ ಕಣ-ಕಣ
ನೀನಿಲ್ಲದ ಕ್ಷಣ
ನೆನಪಾಗುವುದು ಕೊನೆ ಕ್ಷಣ....




ನಿದ್ದಿಲ್ಲದೆ ಕಳೆದ ರಾತ್ರಿಗಳೆಷ್ಟೊ
ಆಗ ಮುದ್ದಾಗಿ ಪೊಣಿಸಿದ ಸಾಲುಗಳೆಷ್ಟೊ
ಲೆಕ್ಕಿಲ್ಲದ ರಾತ್ರಿಗಳಷ್ಟನ್ನೂ 
ಲೆಕ್ಕಿಲ್ಲದ ಸಾಲುಗಳಲ್ಲಿ ಹುಡುಕುತ್ತಿರುವೆ ಇನ್ನು....!!!  

ಆವತ್ತೊ೦ದಿನ ಕನಸಿನಲ್ಲಿ....

ಹನಿಯುತ್ತಿದ್ದ ಆ ದಿನ,
ಒದ್ದೆಯಾದ ಕೊಡೆ ಹಿಡಿದು ಮೆಲ್ಲಗೆ ನಡೆಯುತ್ತಿದ್ದ
ನನ್ನ
ಗಮನ ಮೆಲ್ಲಗೆ ಸೆಳೆದ
ನಿನ್ನ
ಹುಡುಕುತ್ತಿರುವೆ
ಇನ್ನ
ಹನಿಯುತ್ತಿದ್ದ ಆ ದಿನದ ನೆನಪೇ ನ೦ಗಿನ್ನ....





ಕಣ್ಣ್ ತೆಗೆದಾಗ ಕಾಣದ ನೀನು
ಕಣ್ಣ್ ಮುಚ್ಚಿದಾಗ ಕ೦ಡೆ
ಮತ್ತೊ೦ಮ್ಮೆ ನೋಡುವ ಹುಚ್ಚಾಸೆಗೆ ಬಿದ್ದು
ಹಟ ಹಿಡಿದ ಕ೦ಗಳು
ಈಗಲೂ ಕಣ್ಣ್ ಮುಚ್ಚಿ ಕಾದಿವೆ...
ಚಿರ ನಿದ್ರೆಗೆ ಜಾರುವ ಮುನ್ನ,,,,ಒಮ್ಮೆ ಬಾ.......